ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ವಾಣಿ ವಿಲಾಸ ಆಸ್ಪತ್ರೆ) ಕರ್ನಾಟಕದ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯಾಗಿದೆ. ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಜೋಡಿಸಲಾಗಿದೆ. == ಹಿನ್ನಲೆ == ಮಾರ್ಚ್‌ 8, 1935ರಂದು ಈ ಆಸ್ಪತ್ರೆ ಪ್ರಾರಂಭವಾಯಿತು. ಇದನ್ನು ಶ್ರೀ ಕೃಷ್ಣರಾಜ ಒಡೆಯರ್‌ ಉದ್ಘಾಟಿಸಿದರು. ಅವರ ತಾಯಿಯ ಹೆಸರನ್ನು ಈ ಆಸ್ಪತ್ರೆಗೆ ಇಡಲಾಗಿದೆ. ಪ್ರಾರಂಭದಲ್ಲಿ ಸ್ತ್ರೀಯರಿಗೆ 150 ಮತ್ತು ಮಕ್ಕಳಿಗೆ 100 ಹಾಸಿಗೆಗಳ ಸೌಲಭ್ಯವಿತ್ತು. 2017ರಲ್ಲಿ ಸ್ತ್ರೀಯರಿಗೆ 400, ಕುಟುಂಬ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 20 ಮತ್ತು ಮಕ್ಕಳಿಗೆ 80 ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ರೋಗಗಳಿಗೆ 36 ಹಾಸಿಗೆಗಳು ಲಭ್ಯವಿದೆ. == ಘಟನೆಗಳು == 1968ರಲ್ಲಿ ಇದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಆಸ್ಪತ್ರೆಯಾಯಿತು. 2000ರಲ್ಲಿ ತಾಯಿಯಿಂದ ಮಗುವಿಗೆ ಹರಡುವ ಎಚ್‌ಐವಿ ಸೋಂಕಿನ ಪ್ರತಿಬಂಧಕ್ಕೆ ಚಿಕಿತ್ಸೆ ನೀಡುವ ಕಾರ್ಯ ಹಾಗೂ ಅದರ ಪ್ರಭಾವವನ್ನು ಅಭ್ಯಸಿಸುವ ಸಂಶೋಧನೆ ಕೇಂದ್ರ ವೈದ್ಯರಿಗೆ ಮತ್ತು ವೈದ್ಯೇತರ ಸಿಬ್ಬಂದಿಗೆ ತರಬೇತಿ ಕೇಂದ್ರ. == ಉಲ್ಲೇಖಗಳು ==